‘ನಹಿ ಜ್ಞಾನೇನ ಸದೃಶಂ’

Welcome to our website

logo

ಶಾಲೆಯ ಕುರಿತು:

       ನಮ್ಮ ಸರ್ಕಾರಿ ಶಾಲೆ ಜೂನ್ 11ನೇ ತಾರೀಖು 2007 ರಲ್ಲಿ ಸ್ಥಾಪನೆ ಆಯಿತು. ಕುಂಬಾರ ಕೊಪ್ಪಲಿನ ಸರ್ವ ಸಂಪನ್ಮೂಲಗಳನ್ನು ಒಗ್ಗೂಡಿಸಿ ಆರ್ಥಿಕವಾಗಿ ಸದೃಢರಲ್ಲದ ಸಹಸ್ರಾರು ಮಕ್ಕಳ ವಿದ್ಯಾಭ್ಯಾಸವನ್ನು ಮುನ್ನಡೆಸಲು ಅಂದಿನ ಅನೇಕ ಊರಿನ ಮುಖಂಡರುಗಳ ದೂರ ದೃಷ್ಟಿಯ ಫಲವೇ ಇಂದಿನ ಈ ಕುಂಬಾರಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ.
       ತನ್ನದೇ ಆದ ಸ್ಥಳ ಮತ್ತು ಕೊಠಡಿಗಳನ್ನು ಹೊಂದಿರದ ಕಾರಣ ಉನ್ನತೀಕರಿಸಿದ ಸರ್ಕಾರಿ ಶಾಲೆ ಕುಂಬಾರ ಕೊಪ್ಪಲು ಇಲ್ಲಿ 2014ರ ವರೆಗೆ ಶೈಕ್ಷಣಿಕ ಕಾರ್ಯಗಳನ್ನು ಕೈಗೊಳ್ಳಬೇಕಾಯಿತು ಮೊದಲ ಎರಡು ವರ್ಷಗಳು ಅಂದರೆ 2007 ರಿಂದ 2009ರ ವರೆಗೆ ಗುರುವೃಂದವು ಕೇವಲ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀನಿವಾಸ್ ರವರೊಂದಿಗೆ ಗಣಿತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಶಿಕ್ಷಕರನ್ನು ಒಳಗೊಂಡಿತ್ತು 2009ರಲ್ಲಿ ಎಲ್ಲಾ ವಿಷಯದ ಶಿಕ್ಷಕರನ್ನು ಪಡೆದುಕೊಳ್ಳುವಲ್ಲಿ ಪೋಷಕರ ಪಾತ್ರ ನೆನಪಿಸಿಕೊಳ್ಳಬೇಕಾದದ್ದು. ಪ್ರಾಯಶಹ ಅಂದು ಸ್ಥಳ ನೀಡಿ ಹೊಸ ಶಾಲೆ ಶುರುವಾಗಲು ಅವಕಾಶ ನೀಡಿದ ಅಂದಿನ ಪ್ರಾಥಮಿಕ ಶಾಲಾ ಗುರುವೃಂದರ ಬಳಗಕ್ಕೆ ಕೃತಜ್ಞತೆಗಳು ಸಲ್ಲಲ್ಪಡುತ್ತವೆ.
       ಒಂದು ಗಿಡ ಅನೇಕ ಬಿರುಗಾಳಿಗಳನ್ನು ಮಳೆ ಮತ್ತು ಚಳಿ ಹೊಡೆತಗಳನ್ನು ತಾಳಿದಲ್ಲಿ ಮಾತ್ರ ಅದರ ಬೇರುಗಳು ಹಾಳಕ್ಕೆ ಹೋಗಿ ಹೆಮ್ಮರವಾಗಲು ಸಾಧ್ಯ. ಕುಂಬಾರಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯು ಇದಕ್ಕೆ ಹೊರತೆನಲ್ಲ ಕೆಲವೊಮ್ಮೆ ನೆಲಕಚ್ಚಿದುಂಟು ಆದರೆ ಮುಖ್ಯೋಪಾಧ್ಯಾಯರ ಮಾರ್ಗದರ್ಶನದೊಂದಿಗೆ ಊರಿನವರ ಸಹಕಾರದಿಂದ ಶಿಕ್ಷಕರ ಶತ ಪ್ರಯತ್ನದಿಂದ ಇಂದು ನಮ್ಮೂರ ಶಾಲೆ ವಜ್ರದಂತೆ ಹೊಳೆಯುತ್ತಿದೆ. ಅನೇಕ ಮಕ್ಕಳ ವಿದ್ಯಾದೀಪವಾಗಿ ಬೆಳಗುತ್ತಿದೆ.
       

Head Mistress:- 9900584922

laptop image

ಹನಿ ಹನಿ ಗೂಡಿದರೆ ಹಳ್ಳ ಎಂಬುವಂತೆ ಶಾಲೆಯ ಶೈಕ್ಷಣಿಕ ಮತ್ತು ಭೌತಿಕ ಪ್ರಗತಿಗೆ ನನ್ನ ನೆಚ್ಚಿನ ಶಿಕ್ಷಕರುಗಳಾದ ರಿಜ್ವಾನ ತಬಸುಮ್, ಸುಮಿತ್ರ P, ನಾಗರಾಜಪ್ಪ M M, ಪ್ರಭುಸ್ವಾಮಿ M,ಅರುಣ್ ಕುಮಾರ್ M, ರೇಖಾ D R, ಪ್ರವೀಣ್ K S ಜೊತೆಗೆ ಕಚೇರಿ ಸಿಬ್ಬಂದಿ ವರ್ಗದವರಾದ ಪ್ರಭ ಮತ್ತು ಡಿ ಗ್ರೂಪ್ ಸಿಬ್ಬಂದಿ ಲತಾ ಹಾಗೂ ಅಡುಗೆ ಸಿಬ್ಬಂದಿಯವರುಗಳ ಕಾರ್ಯವೈಕರಿ ಮೆಚ್ಚುವಂತದ್ದು. ಸದಾ ನಮ್ಮ ಶಾಲೆಗೆ ಸಲಹೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಕೃಷ್ಣರವರು ಹಾಗೂ ಕುಂಬಾರ ಕೊಪ್ಪಲು ಗ್ರಾಮದ ಹಿರಿಯರು,ಸ್ಥಳೀಯ ಕಾರ್ಪೊರೇಟರ್ಗಳು ಹಾಗೂ ನನ್ನ ಕನಸಿಗೆ ಒತ್ತಾಸೆಯಾಗಿ ನಿಂತಿರುವ ನಮ್ಮ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಫ್ರಾಚ್ಚರ್ ಸೆನ್ಸರ್ ಟೆಕ್ನಾಲಜಿಸ್ ಕಂಪನಿಯವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿರುತ್ತಾರೆ ಹಾಗಾಗಿ ಈ ಸಂದರ್ಭದಲ್ಲಿ ಅವರನ್ನೆಲ್ಲ ನೆನಪಿಸಿಕೊಳ್ಳುತ್ತ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.

laptop image

Let's learn together

How to download sslc past question papers - 7:02 , 12/11/2023

Learn how to use question tags - 20:44 , 14/11/2023

How to download grammar resource - 6:17 , 17/11/2023

How to download NMMS study materials - 3:54 , 17/11/2023

How to write cursive handwriting - 12:03 , 25/11/2023

Join with us

laptop image
laptop image
laptop image
laptop image

Contact Us